Saturday, 3 November 2012

ಮಂಜು ಅಮ್ಮನಪುರ ಅವರ ಹೊಸ ಕವಿತೆ, 'ಅಂತರಂಗದ ಬಯಕೆ'

                                                                 ರೇಖಾಚಿತ್ರ: ಪ್ರಸನ್ನ ನಂಜಾಪುರ
ನಿನ್ನ  ಗೌರವರ್ಣದ  ಪ್ರೀತಿ ತುಂಬಿದ  ಮುಖ

ಅದೇಕೋ  ಬಿಡದೆ  ಕಾಡುತ್ತಿದೆ  ಎನ್ನನು!


ಮರೆತೆನೆಂದರೆ  ಮರೆಯಲಾಗದ   ಬಿಂಬ


ಕೂಗಿ   ಕರೆಯುತ್ತಿರುವ  ಅಂದದ  ಪ್ರತಿಬಿಂಬ.


 

ನೀ ತಿಳಿದಂತೆ  ನಾನಿಲ್ಲ  ನೀರೆ

 

                        ನಿನ್ನ ಪ್ರೀತಿಯ  ಆರಾಕನಷ್ಟೆ ನಾನು

ನಿನ್ನೊಲುಮೆಯ ಕಾಯ್ವ ಚಕೋರನಂತೆ


ಎಡಬಿಡದೆ ಕಾಯುವ ಎಳೆಗರು.


 

ಲೋಕದಲಿ ವಿನಾ:  ಮರುಗುವ  ಮಂದಿಯನು  ನಾ ಬಲ್ಲೆ


ಅವರಿಗಾಗಿ  ಮನದಲ್ಲೇ  ಮರುಕವೇಕೆ…?


ನಿನ್ನ  ಮಿಡಿಯುವ   ಹೃದಯಕ್ಕಾಗಿ  ನನ್ನ  ಬಯಕೆ

ಮರುಕಬಿಟ್ಟು  ನೀ  ದೊರಕೆಂಬುದೆ  ಎನ್ನ  ಅರಿಕೆ.

 

ಸಕಾರಣವಿಲ್ಲದೆ  ವಿಕಾರಗೊಳಿಸುವ

ವಿಕೃತ  ಮನಸ್ಸುಗಳ  ವಿಕಲತೆಗೆ

ಅವಿವೇಕದ ಅಂಜುಬುರುಕುತನ  ತರವೆ..?

ಪವಿತ್ರ ಪ್ರೇಮದ ಹರಣವೆ…..?

 

ನನ್ನಂತರಂಗದ ತುಡಿತ-ಮಿಡಿತಗಳು

ಬರಡು ಬಿನ್ನಾಣದ ಬಯಕೆಗಳಲ್ಲ

ಮರುಭೂಮಿಯ ಖರ್ಜೂರದಂತೆ

ಹುಣ್ಣಿಮೆಯ ಚಂದಿರನ ಬೆಳದಿಂಗಳ ಸುಧೆಯಂತೆ

 

ಯೋಚಿಸು.. ಯೋಚಿಸು.. ಆಲೋಚಿಸು…..

ಯೋಚನೆಯಷ್ಟೆ ನಿನಗೆ

ಯಾತನೆಯಲ್ಲಾ ನನಗೆ………..