ನನಗೆ ಗೊತ್ತು ..
ನಿನ್ನ ನಗು ಕೇವಲ ಸಂತಸದಲ್ಲ
ಅದು ಎಷ್ಟೋ ವರ್ಷಗಳು
ನಿನ್ನ ಗಟ್ಟಿಗೊಳಿಸಿದ ಸಹನೆಯದ್ದು
ನಿನ್ನೊಳಗಿನ ದು:ಖ ನಗಿಸಿದ್ದು
ಹೌದು ನೆಲ್ಸನ್
ನೀನು ಸೆರೆಮನೆಯಿಂದ
ಬಿಡುಗಡೆಗೊಂಡ ದಿನ
ಜನರತ್ತಾ ಕೈ ಬೀಸಿ ನಕ್ಕಿದ್ದು
ಇದೇ ಮುಗುಳ್ ನಗೆ
ಅದು ಜನರ ಹೃದಯಗಳಲ್ಲಿ
ಎಂದಿಗೂ ಮಾಸುವುದಿಲ್ಲ
ಅಳುವ ಜನರ ನಗುವಿಗಾಗಿ
ಮಾನವತೆಯ ಘನತೆಗಾಗಿ
ನೀನು ಬದುಕಿದೆ ಎಂಬುದನ್ನು
ಅವರು ಅರಿತಿದ್ದಾರೆ
ಹೌದು ನೆಲ್ಸನ್
ಮೈ ಬಣ್ಣವೇ ಮಾನವನನ್ನು
ರೂಪಿಸುವಂತಿದ್ದರೆ
ಬುದ್ಧ ಮಾತನಾಡುವ ಅಗತ್ಯವಿತ್ತೆ
ಕ್ರಿಸ್ತ ಶಿಲುಬೆಗೇರಬೇಕಾಗಿತ್ತೆ....?
ಇಂದು ಇಡೀ ಜಗತ್ತು
ನಿನ್ನ ಹೊಗಳುತ್ತಿರುವುದು
ನೀನು ಕರಿಯನೆಂಬ ಕಾರಣಕ್ಕಲ್ಲ
ಮನುಷ್ಯರ ಬಗ್ಗೆ ಚಿಂತಿಸಿದ್ದಕ್ಕಾಗಿ
ಕರಿ-ಬಳಿ ಚರ್ಮದ ಹೊದಿಕೆಗಳೊಳಗೆ
ಮನುಷ್ಯರು ಬೇರೆ ಬೇರೆ ಯಲ್ಲ
ಎಂಬುದನ್ನು ತಿಳಿಸಿದ್ದಕ್ಕೆ ನಾವು ಮಾತ್ರ ನಿಮಗೆ
ಋಣಿಗಳಲ್ಲ
ಮುಂದಿನ ಜನಾಂಗವು ನಿಮ್ಮನ್ನು ಸ್ಮರಿಸಲಿದೆ
ಹೌದು ನೆಲ್ಸನ್
ಅವರ ಹೃದಯಗಳಲ್ಲಿ ನೀನು
ಮುಗುಳ್ ನಗುತ್ತಲೇ ಇರುತ್ತೀಯ
ನಾರಾಯಣ್
ಕೆ ಕ್ಯಾಸಂಬಳ್ಳಿ
ಸಂಶೋಧನಾ
ವಿದ್ಯಾರ್ಥಿ
ಕುವೆಂಪು
ಕನ್ನಡ ಅಧ್ಯಯನ ಸಂಸ್ಥೆ
ಮಾನಸ
ಗಂಗೋತ್ರಿ, ಮೈಸೂರು.
ಮೊ:
9900733141
Email. narayankkyasamballi@gmail.com


No comments:
Post a Comment