ಆ ದಿನ ಬಿದ್ದ ಕಣ್ಣಿರ ಬಿಂದುಗಳು
ಹೀಗೆ ಬದುಕನ್ನು ಕೊಚ್ಚಿಕೊಂಡು ಹೋದವೆ?
ಯಾಕಾದರೂ ಬಂದಿತು ಆ ದಿನ, ಆ ಸಮಯ
ತಾಳಿ, ಗಟ್ಟಿಮೇಳ, ರೆಶಿಮೆ
ಸೀರೆಗಳ ಸರಪರ ಸದ್ದಿನ ಗಾನ
ಪುನರ್ವಸು ಪುಷ್ಯದ ಸಡಗರಕ್ಕೆ
ಎಲ್ಲಿ ಕಾಣಬೇಕು ಕಣ್ಣೀರ ಬಿಂದುಗಳು
ಮರದ ಬಂಡಿಯ ಕುಲುಕಾಟ
ಪಯಣೀಸಲೇ ಬೇಕು,ಇರಲಿ......ಇಲ್ಲದಿರಲಿ
ಒಳ ಒಳಗೆ ಚಿತಾಗ್ನಿ, ಹೊರಗೆ
ಮೌನ ಮೀರಿ ನಗದಿದ್ದರೆ ?
ಬಿರುಗಾಳಿಗೂ ಮುನ್ನ ಮೌನ
ಒಮ್ಮೊಮ್ಮೆ ಭೂಮಿ ಸವರಿದಂತೆ ಬೀಗಬೇಕು
ಕಟ್ಟಿದ ಕನಸುಗಳೆಷ್ಟೋ ? ಬಯಕೆಗಳಿಗೆ
ಲೆಕ್ಕವಿಟ್ಟವರಾರು ?
ಒಳಗೆ ಸುಂಟರಗಾಳಿಯ ಮೊರೆತ
ಹೊರಗೆ ಲಾವಣ್ಯದ ಲಾಲಸ್ಯದ ನಗು
ಎಲ್ಲಿ ಕಾಣಬೇಕು ? ನನ್ನೊಳಗಿನ ಕಣ್ಣೀರು
ಹೀಗೆ ಬದುಕನ್ನು ಕೊಚ್ಚಿಕೊಂಡು ಹೋದವೆ?
ಯಾಕಾದರೂ ಬಂದಿತು ಆ ದಿನ, ಆ ಸಮಯ
ತಾಳಿ, ಗಟ್ಟಿಮೇಳ, ರೆಶಿಮೆ
ಸೀರೆಗಳ ಸರಪರ ಸದ್ದಿನ ಗಾನ
ಪುನರ್ವಸು ಪುಷ್ಯದ ಸಡಗರಕ್ಕೆ
ಎಲ್ಲಿ ಕಾಣಬೇಕು ಕಣ್ಣೀರ ಬಿಂದುಗಳು
ಮರದ ಬಂಡಿಯ ಕುಲುಕಾಟ
ಪಯಣೀಸಲೇ ಬೇಕು,ಇರಲಿ......ಇಲ್ಲದಿರಲಿ
ಒಳ ಒಳಗೆ ಚಿತಾಗ್ನಿ, ಹೊರಗೆ
ಮೌನ ಮೀರಿ ನಗದಿದ್ದರೆ ?
ಬಿರುಗಾಳಿಗೂ ಮುನ್ನ ಮೌನ
ಒಮ್ಮೊಮ್ಮೆ ಭೂಮಿ ಸವರಿದಂತೆ ಬೀಗಬೇಕು
ಕಟ್ಟಿದ ಕನಸುಗಳೆಷ್ಟೋ ? ಬಯಕೆಗಳಿಗೆ
ಲೆಕ್ಕವಿಟ್ಟವರಾರು ?
ಒಳಗೆ ಸುಂಟರಗಾಳಿಯ ಮೊರೆತ
ಹೊರಗೆ ಲಾವಣ್ಯದ ಲಾಲಸ್ಯದ ನಗು
ಎಲ್ಲಿ ಕಾಣಬೇಕು ? ನನ್ನೊಳಗಿನ ಕಣ್ಣೀರು
1 comment:
ಶೇತಾ ನಿಮ್ಮ ಕವಿತೆ ತುಂಭಾ ಚನ್ನಾಗಿದೆ.
ಈ ಕವಿತೆಯ ಪ್ರತಿ ಸಾಲುಗಳು ಹೆಣ್ಣಿನ ಅಂತರಂಗವನ್ನು ಕುರಿತು ಮಾತನಾಡುತ್ತಿವೆ.
Post a Comment